ಕ್ಯಾಂಟೆಮಿರ್, ಆಂಟಿಯೋಕ್  
1708-1744. ರಷ್ಯನ್ ವಿಡಂಬನಕಾರ. ಶ್ರೀಮಂತ ಮನೆತನದಲ್ಲಿ ಹುಟ್ಟಿದ ಈತ ರಾಜಕೀಯವನ್ನು ಪ್ರವೇಶಿಸಿ, ಮಂತ್ರಿಪದವಿಯನ್ನು ಪಡೆದ. ಪ್ರಗತಿ ವಿರೋಧಿಗಳಾದ ಹಳೆಯ ಕಾಲದ ಮನೋಭಾವದ ಜನರನ್ನೂ ಯೂರೋಪಿನ ಫ್ಯಾಷನ್‍ಗಳ ಅನುಕರಣೆಯಲ್ಲಿ ತೊಡಗಿದ ಅಲಂಕಾರಪ್ರಿಯ ಯುವಕರನ್ನೂ ಈತ ಹಾಸ್ಯಮಾಡಿದ್ದಾನೆ. ಇವನ ವಿಡಂಬನೆಗಳು ಪ್ರಕಟವಾದುದು 1762ರಲ್ಲಿ. ಕುತೂಹಲವನ್ನು ಕೆರಳಿಸುವಂಥ ಸಮಕಾಲೀನ ಜೀವನದ ಚಿತ್ರಗಳು ಇಲ್ಲಿ ದೊರಕುತ್ತವೆ. ಸೋದ್ದೇಶ ಕಲೆಯನ್ನು ರಷ್ಯನ್ ಸಾಹಿತ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ಕಾಣುವುದು ಈ ವಿಡಂಬನೆಗಳಲ್ಲಿ. ಕ್ಯಾಂಟೆಮಿರ್ ಹಳೆಯ ಸಿಲಬಿಕ್ ಛಂದಸ್ಸನ್ನು ಬಳಸಿಕೊಂಡಿದ್ದಾನೆ. ವಿಡಂಬನಕಾರನಾಗಿ ಈತ ಹಾರೆಸನನ್ನು ಹೋಲುತ್ತಾನೆ ಎನ್ನಲಾಗಿದೆ. 		(ಎಲ್.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ